ಕುವೈತ್ ಜಿ.ಎಸ್.ಬಿ.ಸಭಾ ಕೊಲ್ಲಿ ನಾಡಾದ ಕುವೈತ್ ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಅಸ್ತಿತ್ವದಲ್ಲಿದ್ದು, ಇದೀಗ ದಶಮಾನೋತ್ಸವವನ್ನು ಆಚರಿಸುವ ತಯಾರಿಯಲ್ಲಿದೆ. ಇದರ ಅಂಗವಾಗಿ ಇಲ್ಲಿನ ಅವಂತಿ ಪ್ಯಾಲೇಸ್ ಹೋಟೆಲ್ ನ ಸಭಾಂಗಣದಲ್ಲಿ ಅಧಿಕೃತ ಲಾಂಛನ ಬಿಡುಗಡೆಯ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ, ಕೇರಳ ಹಾಗೂ ಇತರ ರಾಜ್ಯಗಳಿಂದ ಬಂದು ಕುವೈತ್ ನಲ್ಲಿ ನೆಲೆಸಿರುವ ಸಮಸ್ತ ಗೌಡ, ಸಾರಸ್ವತ, ಕೊಂಕಣಿ ಸಮಾಜ ಬಾಂಧವರು ಭಾಗಿಯಾಗಿದ್ದರು. ದಶಮಾನೋತ್ಸವ ಕಾರ್ಯಕಾರಿ ಸಮಿತಿಯ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಅಶುತೋಷ್ ಭಟ್ ವಿಘ್ನನಾಶಕನ ಪ್ರಾರ್ಥನೆಯ ಗೀತೆಯನ್ನು ಇಂಪಾಗಿ ಹಾಡಿದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ.ಸುರೇಂದ್ರ ನಾಯಕ್ ಕಾಪಾಡಿ ಅವರು ಸ್ವಾಗತಿಸಿ ಕುವೈತ್ ಜಿ.ಎಸ್.ಬಿ.ಸಭಾ ಹತ್ತು ವರ್ಷ ಸಾಗಿಬಂದ ಹಾದಿಯನ್ನು ವಿವರಿಸಿದರು. ಮತ್ತು ಜನವರಿ 24ರಂದು ಆಚರಿಸಲು ಉದ್ದೇಶಿಸಿರುವ ದಶಮಾನೋತ್ಸವ ಕಾರ್ಯಕ್ರಮದ ವಿವರಗಳನ್ನು ತಿಳಿಸಿದರು. ಮಂಜೇಶ್ವರ ಪದ್ಮನಾಭ ಕಾಮತ ವಿಶೇಷ ಅಥಿತಿಗಳಾಗಿ ಭಾಗವಹಿಸಿ ಅಧಿಕೃತ ಲಾಂಚನವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕಟಪಾಡಿ ರಮಾನಾಥ್ ಶೆಣೈ ಅಧಿಕೃತ ನಾಮಪಲಕವನ್ನು ಬಿಡುಗಡೆ ಮಾಡಿದರು. ಸಭಾದ ಜನ ಸಂಪರ್ಕಾಧಿಕಾರಿ ಮಂಜೇಶ್ವರ ಮೋಹನದಾಸ್ ಕಾಮತ್ ಕಾರ್ಯಕ್ರಮ ನಿರೂಪಣೆ ಮಾಡಿದರು. ನವೀನ ಪ್ರಭು ಸದಸ್ಯರಿಗೆ ಲಘು ಮನರಂಜನೆಯ ಹಾಸ್ಯ ಪ್ರಲಾಪ ಮಾಡಿ ರಂಜಿಸಿದರು. ಕಾರ್ಯದರ್ಶಿ ಶ್ರೀನಿವಾಸ್ ಪ್ರಭು ವಂದಿಸಿದರು. ಉಪಾಧ್ಯಕ್ಷ ಸುಧೀರ್ ಶೆಣೈ, ಕೋಶಾಧಿಕಾರಿ ರಮಾನಂದ್ ಕಾಮತ್, ಸಹಕೊಶಾಧಿಕಾರಿ ಗಿರೀಶ್ ಶೆಣೈ ಕಾರ್ಯಕ್ರಮದ ಅಂದಾಜು ವೆಚ್ಚದ ವಿವರಗಳನ್ನು ಮಂಡಿಸಿದರು. ಗೋಕುಲದಾಸ್ ಭಟ್ ಕಾರ್ಯಕ್ರಮವನ್ನು ಪ್ರಾಯೋಜಿಸಿದರು. ಗಣೇಶ್ ಪ್ರಭು, ಗಣೇಶ್ ಭಟ್, ಶ್ರೀನಾಥ್ ಭಟ್, ಸುಧೇಶ್ ನಾಯಕ್, ಉದಯ್ ವೆರ್ನೆಕರ್, ಶಾಂತಾರಾಮ್ ಪೈ, ಸಾಗರ್ ಭಟ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಭಾದ ಗೌರವಾಧ್ಯಕ್ಷ ಹರಿದಾಸ್ ಆಚಾರ್ಯ, ಪ್ರಕಾಶ್ ಪೈ.ಬಿ., ದಿನೇಶ್ ಕಾಮತ್, ಮುಲ್ಕಿ ರಾಜಾರಾಂ ಪೈ ಕಟೀಲ್, ಅನಿಲ್ ಪ್ರಭು, ವಿಶ್ವನಾಥ್ ಪ್ರಭು, ಮಂಜುನಾಥ್ ಕುಡ್ವ, ಏಕನಾಥ್ ವೆರ್ನೆಕರ್ ದಶಮಾನೋತ್ಸವ ಸಮಾರಂಭಕ್ಕೆ ಶುಭವನ್ನು ಹಾರೈಸಿದರು.