ಗಾಯಿತ್ರಿ ಮಂತ್ರ

By: ಗಾಯಿತ್ರಿ ಮಂತ್ರ

1/14/2021 12:00:00 AM

ಗಾಯಿತ್ರಿ ಮಂತ್ರ
ಸಾವಿರಾರು ಪಟ್ಟು ಹೆಚ್ಚಿನ ಪರಿಣಾಮ ಪಡೆಯಲು ಗುರುಗಳ ಸಮ್ಮುಖದಲ್ಲಿ ಸಾಧನೆ ಮಾಡಿರಿ, ದಿನ ಗಾಯತ್ರೀ ಮಂತ್ರ ಪಠಣೆಯಿಂದ ದೈಹಿಕ ,ಮಾನಸಿಕ ವಿದ್ಯೆ, ಬುದ್ಧಿ, ಜ್ಞಾಪಕ ಶಕ್ತಿ ಎಲ್ಲದರಲ್ಲೂ ತೆಜಸ್ಸನ್ನು ಪಡಿತ್ತೀರಿ.... ಈ ಪೋಸ್ಟ ಇಷ್ಟವಾದರೆ ಶೇರ್ ಮಾಡಿರಿ
ವಿಶ್ವಾಮಿತ್ರ ಮಹರ್ಷಿಗಳೇ ಹೇಳುವಂತೆ
ನಾಲ್ಕು ವೇದಗಳು ಹುಡುಕಿದರೂ ಈ ಮಂತ್ರಕ್ಕೆ ಸರಿ ಹೊಂದುವ ಬೇರೆ ಮಂತ್ರವಿಲ್ಲ , ಸಮಸ್ತ ವೇದಗಳು , ಯಜ್ಞಗಳೂ , ದಾನಗಳೂ, ವಿವಿಧ ತಪಸ್ಸುಗಳು ದಾನಗಳು ಸೇರಿಸಿದರೂ ಈ ಗಾಯತ್ರೀ ಮಂತ್ರದ ಮಹಾತ್ಮೆಗೆ ಸಮವಾಗಲಾರದು..

ಸ್ವತಃ ಬ್ರಹ್ಮನೇ ಗಾಯತ್ರೀ ಮಂತ್ರದ ಮಹಾತ್ಮೆ ಯನ್ನು ಹೀಗೆ ವರ್ಣಿಸಿದ್ದಾನೆ...

ಗಾಯತ್ರ್ಯಾಃ ನ ಪರಂಜಪ್ಯಂ
ಗಾಯತ್ರ್ಯಾಃ ನ ಪರಂ ತಪಃ l
ಗಾಯತ್ರ್ಯಾಃ ನ ಪರಂ ದ್ಯೇಯಂ
ಗಾಯತ್ರ್ಯಾಃ ನ ಪರಂ ಹುತಃ ll

#ಅರ್ಥಾತ
ಗಾಯತ್ರೀ ಮಂತ್ರ ಜಪಕ್ಕಿಂತಲೂ ಹೆಚ್ಚಿನ ಮಂತ್ರ ಜಪ ಮತ್ತೊಂದಿಲ್ಲ, ಅದಕ್ಕಿಂತಲೂ ತಪಸ್ಸೂ ಬೇರೆ ಇಲ್ಲ . ಆ ಮಂತ್ರಕ್ಕಿಂತಲೂ ಧ್ಯೇಯವಾದುದು ಇನ್ನಿಲ್ಲ . ಗಾಯತ್ರೀ ಹೋಮಕ್ಕಿಂತಲೂ ಹಿರಿದಾದ ಬೇರೆ ಹೋಮವೇ ಇಲ್ಲ ..

#ಹಾಗಾದರೆ ಈ ಗಾಯತ್ರೀ ಮಂತ್ರದ ಮಹತ್ವ ಏನು .... ಸ್ನೇಹಿತರೇ ಅದನ್ನು ಬಿಡಿಸಿ ಹೇಳುತ್ತೇನೆ ಕೇಳಿ...

ಗಾಯತ್ರೀ ಮಹಾ ಮಂತ್ರ....

ಓಂ ಭೂರ್ಭುವಸ್ಸುವಃ
ತತ್ಸುವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧೀಯೋ ಯೋ ನಃ ಪ್ರಚೋದಯಾತ್

ಇದು ಗಾಯತ್ರೀ ಮಹಾ ಮಂತ್ರ.....ಈ ಮಹಾಮಂತ್ರದಲ್ಲಿ ಮಹಾಶಕ್ತಿ ಅಡಗಿದೆ . ಹೇಗೆ ಅಂದರೆ ಆ ಮಂತ್ರದ ಪ್ರತಿಯೊಂದು ಅಕ್ಷರವೂ ಒಂದೊಂದು ದೇವರ ಬೀಜಾಕ್ಷರವೇ ಆಗಿದೆ . ಈ ಇಪ್ಪತ್ತನಾಲ್ಕು ಅಕ್ಷರಗಳ ಸಮಷ್ಟೀ ಗಾಯತ್ರೀ ಮಂತ್ರ ದಲ್ಲಿ ಗಾಯತ್ರೀ ,ಸಾವಿತ್ರೀ , ಸರಸ್ವತೀ , ಮತ್ತು ಸಂದ್ಯಾ ದೇವತೆಗಳಲ್ಲದೇ ಗಣಪತಿ ಯಿಂದ ಆರಂಭಿಸಿ ತುಲಸಿವರೆಗೆ ಇಪ್ಪತ್ತನಾಲ್ಕು ಪ್ರಮುಖ ದೇವತೆಗಳ ಮತ್ತು ದೈವಿ ಶಕ್ತಿಯ ಉಪಾಸನೆ ಇದೆ. ಆದುದರಿಂದ ಶ್ರದ್ಧಾ ಭಕ್ತಿಯಿಂದ ಮಾಡಿದ ಗಾಯತ್ರೀ ಜಪದ ಪರಿಣಾಮ ವಾಗಿ ಸಾಧಕನಿಗೆ ಇಪ್ಪತ್ತನಾಲ್ಕು ದೇವತೆಗಳನ್ನು ಆರಾಧಿಸಿದ ಶಕ್ತಿಯು ಸಮನ್ವಯವಾಗುತ್ತದೆ. ಗಾಯತ್ರೀ ಮಂತ್ರದ ಪ್ರತಿಯೊಂದು ಅಕ್ಷರವನ್ನು ಬಿಡಿಸಿ ನೋಡಿದಾಗ...‌

1ತ 2 ತ್ಸ 3 ವಿ 4 ತು 5 ರ್ವ 6 ರೇ 7 ಣಿ 8 ಯಂ 9 ಭ 10 ರ್ಗೋ 11 ದೇ 12 ವ 13 ಸ್ಯ 14 ಧೀ 15 ಮ 16 ಹೀ 17 ಧೀ 18 ಯೋ 19 ಯೋ 20 ನಃ 21 ಪ್ರ 22ಚೋ 23 ದ 24 ಯಾತ್....

ಹಾಗಾದರೆ ಈ ಇಪ್ಪತ್ತನಾಲ್ಕು ಅಕ್ಷಗಳಲ್ಲಿ ಇಪ್ಪತ್ತನಾಲ್ಕು ದೇವತೆಗಳ ಶಕ್ತಿ ಹೇಗೆ ಅಂತ ಬಿಡಿಸಿ ಹೇಳುತ್ತೇನೆ ಕೇಳಿ

ಮೊದಲನೇ ಅಕ್ಷರ ತ ಕಾರ ಇದು ಅಂದಕಾರವನ್ನು ತೊಲಗಿಸುತ್ತದೆ. ಇದು ಗಣೇಶ ಗಾಯತ್ರೀ..

#ಓಂಏಕದಂತಾಯವಿದ್ಮಹೇವಕ್ರತುಂಡಾಯಧಿಮಹೀತನ್ನೋದಂತೀ_ಪ್ರಚೋದಯಾತ್

ಎರಡನೇಯ ಅಕ್ಷರ *ತ್ಸ * ಇದು ಉಪಪಾತಕವನ್ನು ಹೋಗಲಾಡಿಸುತ್ತದೆ. ಇದು ನೃಸಿಂಹ ಗಾಯತ್ರೀ

#ಓಂಉಗ್ರನೃಸಿಂಹಾಯವಿದ್ಮಹೇವಜ್ರನಖಾಯ_ಧೀಮಹಿತನ್ನೋನೃಸಿಂಹ_ಪ್ರಚೋದಯಾತ್

ಮೂರನೇಯ ಅಕ್ಷರ *ವಿ * ಇದು ವಿಕಾರ ವಿಪತ್ತನ್ನು ಹೋಗಲಾಡಿಸುತ್ತದೆ. ವಿಷ್ಣು ಗಾಯತ್ರೀ

#ಓಂನಾರಾಯಣಾಯವಿದ್ಮಹೇವಾಸುದೇವಾಯ_ಧೀಮಹಿತನ್ನೋವಿಷ್ಣುಃಪ್ರಚೋದಯಾತ್

ನಾಲ್ಕು * ತು * ಕಾರ ದುಷ್ಟ ಗ್ರಹ ದೋಷವನ್ನು ಹೋಗಲಾಡಿಸುತ್ತದೆ. ಶಿವ ಗಾಯತ್ರೀ

#ತತ್ವುರುಷಾಯವಿದ್ಮಹೇಮಹಾದೇವಾಯಧೀಮಹಿತನ್ನೋರುದ್ರಃಪ್ರಚೋದಯಾತ್

ಐದು ಅಕ್ಷರ * ರ್ವ* ಕಾರ ಇದು ಭ್ರೂಣ ಹತ್ಯಾ ದೋಷ ಪರಿಹರಿಸುತ್ತದೆ. ಇದು ಕೃಷ್ಣ ಗಾಯತ್ರೀ.

#ದೇವಕಿನಂದಾಯವಿದ್ಮಹೇವಸುದೇವಾಯಧೀಮಹಿತನ್ನೋಕೃಷ್ಣಪ್ರಚೋದಯಾತ್

ಆರು ಅಕ್ಷರ * ರೇ * ಕಾರ ಆಗಮ್ಯಾಗಮನ ದೋಷ ಪರಿಹಾರ ಇದು ರಾಧಾ ಗಾಯತ್ರೀ

#ಓಂವೃಷಭಾನುಜಾಯವಿದ್ಮಹೇಕೃಷ್ಣಪ್ರೀಯಾಯಧೀಮಹಿತನ್ನೋರಾಧಾ_ಪ್ರಚೋದಯಾತ್

ಏಳು ಅಕ್ಷರ * ಣಿ * ಕಾರ ಅಭಕ್ಷ್ಯಾಭಕ್ಷಣ ದೋಷ ಪರಿಹಾರ ... ಇದು ಲಕ್ಷೀ ಗಾಯತ್ರೀ.

#ಓಂಮಹಾಲಕ್ಷೀಚವಿದ್ಮಹೇವಿಷ್ಣುಪತ್ನಿಚಧೀಮಹಿತನ್ನೋಲಕ್ಷೀ_ಪ್ರಚೋದಯಾತ್

ಏಂಟು ಅಕ್ಷರ * ಯಂ.* ಕಾರ ಇದು.ಬ್ರಹ್ಮ ಹತ್ಯಾಪಾತಕಗಳನ್ನು ಹೋಗಲಾಡಿಸುತ್ತದೆ
ಇದು ಅಗ್ನಿ ಗಾಯತ್ರೀ

#ಓಂಮಹಾಜ್ವಾಲಾಯವಿದ್ಮಹೇಅಗ್ನಿಜ್ವಾಲಾಯಧೀಮಹಿತನ್ನೋಅಗ್ನಿ_ಪ್ರಚೋದಯಾತ

ಒಂಬತ್ತು ಅಕ್ಷರ * ಭ *ಕಾರ ಇದು ಪುರುಷ ಹತ್ಯಾಪಾತಕವನ್ನು ನಾಶಮಾಡುತ್ತದೆ..ಇದು ಇಂದ್ರ ಗಾಯತ್ರೀ

#ಓಂಸಹಸ್ರನೇತ್ರಾಯವಿದ್ಮಹೇವಜ್ರನಖಾಯಧೀಮಹಿತನ್ನೋಇಂದ್ರಃಪ್ರಚೋದಯಾತ್

ಹತ್ತು ಅಕ್ಷರ ರ್ಗೋಕಾರ ಗೋಹತ್ಯಾ ದೋಷದಿಂದ ವಿಮುಕ್ತಿಗೊಳಿಸುತ್ತದೆ. ಇದು ಸರಸ್ವತೀ ಗಾಯತ್ರೀ

#ಓಂಸರಸ್ವತ್ತೈಚವಿದ್ಮಹೇಬ್ರಹ್ಮಪತ್ನಿಚಧೀಮಹಿತನ್ನೋವಾಣಿಪ್ರಚೋದಯಾತ್

ಹನ್ನೊಂದು * ದೇ * ಕಾರ ಇದು ಸ್ತ್ರೀ ಹತ್ಯಾದೋಷವನ್ನು ನಿವಾರಿಸುತ್ತದೆ. ಇದು ದುರ್ಗಾ ಗಾಯತ್ರೀ..
#ಓಂಗಿರಿಜಾಯೈವಿದ್ಮಹೇಶಿವಪ್ರೀಯಾಯೈ__ಧೀಮಹಿತನ್ನೋದುರ್ಗಾಪ್ರಚೋದಯಾತ್

ಹನ್ನೆರಡು ಅಕ್ಷರ * ವ *ಕಾರ ಇದು ಕೂಡಾ ಸ್ತ್ರೀ ಹತ್ಯಾದೋಷವನ್ನು ಹೋಗಲಾಡಿಸುತ್ತದೆ. ಇದು ಹನುಮದ್ಗಾಯತ್ರೀ

#ಓಂಅಂಜನಾಸುತಾಯವಿದ್ಮಹೇವಾಯುಪುತ್ರಾಯಧೀಮಹಿತನ್ನೋಆಂಜನೇಯ_ಪ್ರಚೋದಯಾತ್

ಹದಿಮೂರು ಅಕ್ಷರ * ಸ * ಕಾ
ರ ಇದು ಗುರುಹತ್ಯಾ ದೋಷದಿಂದ ಪಾರುಮಾಡುತ್ತದೆ. ಇದು ಪೃಥ್ವಿ ಗಾಯತ್ರೀ

#ಓಂಪೃಥ್ವಿದೇವೈವಿದ್ಮಹೇಸಹಸ್ರಮೂರ್ತೈ_ಧೀಮಹೆತನ್ನೋಪೃಥ್ವಿಪ್ರಚೋದಯಾತ್

ಹದಿನಾಲ್ಕು ಅಕ್ಷರ *ಧೀ * ಕಾರ ಮಾತೃ ಮತ್ತು ಪಿತೃ ನಿಂದಾ ಪಾಪವನ್ನು ನಾಶಮಾಡುತ್ತದೆ...
ಇದು ಸೂರ್ಯ ಗಾಯತ್ರೀ

#ಓಂಭಾಸ್ಕರಾಯವಿದ್ಮಹೇದಿವಾಕರಾಯಧೀಮಹಿತನ್ನೋಸೂರ್ಯಃಪ್ರಚೋದಯಾತ್

ಹದಿನೈದು ಅಕ್ಷರ * ಮ* ಕಾರ ಇದು ಪೂರ್ವ ಜನ್ಮಾರ್ಜಿತ ಪಾಪವನ್ನು ನಾಶಮಾಡುತ್ತದೆ. ಇದು ರಾಮ ಗಾಯತ್ರೀ....
#ಓಂದಾಶರಥಾಯವಿದ್ಮಹೇಸೀತಾವಲ್ಲಭಾಯಧೀಮಹಿತನ್ನೋರಾಮಃಪ್ರಚೋದಯಾತ್

ಹದಿನಾರು ಅಕ್ಷರ * ಹಿ* ಕಾರ ಇದು ಅಶೇಷ ಪಾಪ ಸಮೂಹವನ್ನು ನಾಶಪಡಿಸುತ್ತದೆ.ಇದು ಸೀತಾ ಗಾಯತ್ರೀ
#ಓಂಜನಕನಂದಿನ್ನೈವಿದ್ಮಹೇಭೂಮಿಜಾಯೈಧೀಮಹಿ ತನ್ನೋಸೀತಾಪ್ರಚೋದಯಾತ್

ಹದಿನೇಳು ಅಕ್ಷರ * ಧೀ* ಕಾರ . ಪ್ರಾಣಿ ವಧಾಪಾಪವನ್ನು ನಾಶಮಾಡುತ್ತದೆ. ಇದು ಚಂದ್ರ ಗಾಯತ್ರೀ.#ಓಂಕ್ಷೀರಪುತ್ರಾಯವಿದ್ಮಹೇಅಮೃತತತ್ವಾಯಧೀಮಹಿತನ್ನೋಚಂದ್ರಃಪ್ರಚೋದಯಾತ್

ಹದಿನೆಂಟನೇಯ ಅಕ್ಷರ * ಯೋ* ಕಾರ ಇದು ಪ್ರತಿಗ್ರಹ ಪಾಪವನ್ನು ನಾಶಮಾಡುತ್ತದೆ...ಇದು ಯಮ ಗಾಯತ್ರೀ..

#ಓಂಸೂರ್ಯಪುತ್ರಾಯವಿದ್ಮಹೇಮಹಾಕಾಲಾಯಧೀಮಹಿತನ್ನೋಯಮಃ_ಪ್ರಚೋದಯಾತ್

ಹತ್ತೊಂಬತ್ತು ಅಕ್ಷರ * ಯೋ* ಕಾರ ಸರ್ವಪಾಪ ನಿವಾರಕ. ಇದು ಬ್ರಹ್ಮ ಗಾಯತ್ರೀ

#ಓಂಚತುರ್ಮುಖಾಯವಿದ್ಮಹೇಹಂಸರೂಢಾಯಧೀಮಹಿತನ್ನೋಬ್ರಹ್ಮಪ್ರಚೋದಯಾತ್

ಇಪ್ಪತ್ತನೇಯ ಅಕ್ಷರ * ನ *ಕಾರ , ಇದರಿಂದ ಈಶ್ವರ ಪ್ರಾಪ್ತಿ ಇದು ವರುಣ್ ಗಾಯತ್ರೀ

#ಓಂಜಲಬಿಂಬಾಯವಿದ್ಮಹೇನೀಲಪುರುಷಾಯಧೀಮಹಿತನ್ನೋವರುಣಪ್ರಚೋದಯಾತ್

ಇಪ್ಪತ್ತೊಂದು ಅಕ್ಷರ * ಪ್ರ * ಕಾರ .ವಿಷ್ಣುಲೋಕ ಪ್ರಾಪ್ತಿಯಾಗುತ್ತದೆ. ಇದು ನಾರಾಯಣ ಗಾಯತ್ರೀ

#ಓಂನಾರಾಯಣಾಯವಿದ್ಮಹೇವಾಸುದೇವಾಯಧೀಮಹಿತನ್ನೋನಾರಾಯಣಪ್ರಚೋದಯಾತ್

ಇಪ್ಪತ್ತೇರಡು ಅಕ್ಷರ ಚೋ ಕಾರ

#ಓಂವಾಗೀಶ್ವರಾಯವಿದ್ಮಹೇಹಯಗ್ರೀವಾಯಧೀಮಹಿತನ್ನೋಹಯಗ್ರೀವಃ_ಪ್ರಚೋದಯಾತ್

ಇಪ್ಪತ್ತಮೂರು ಅಕ್ಷರ * ದ * ಕಾರ ಬ್ರಹ್ಮ ಪದ ಪ್ರಾಪ್ತಿಗೆ ಸಹಾಯಕ. ಇದು ಹಂಸ ಗಾಯತ್ರೀ

#ಓಂಪರಮಹಂಸಾಯವಿದ್ಮಹೇಮಹಾಹಂಸಾಯಧೀಮಹಿತನ್ನೋಹಂಸಃಪ್ರಚೋದಯಾತ್

ಇಪ್ಪತ್ತನಾಲ್ಕು ಅಕ್ಷರ * ಯಾತ್* ಕಾರ ತ್ರಿಮೂರ್ತಿಗಳ ಪ್ರಸಾರ ಸಿಧ್ದಿಯಾಗಲು ಇದು ಉಪಯುಕ್ತ . ಇದು ತುಲಸೀ ಗಾಯತ್ರೀ.‌‌‌....

#ಓಂತುಲಸ್ಮೈವಿದ್ಮಹೇವಿಷ್ಣುಪ್ರೀಯಾಯೈ_ಧೀಮಹಿತನ್ನೋಬೃಂದಾ_ಪ್ರಚೋದಯಾತ್

ಇವು ಇಪ್ಪತ್ತನಾಲ್ಕು ಅಕ್ಷರ ಗಾಯತ್ರೀ ಮಂತ್ರದಲ್ಲಿ ಇಡೀ ದೇವ ಸಮೂಹವನ್ನೇ ಆರಾದಿಸಿದ ಪುಣ್ಯ ಪ್ರಾಪ್ತಿ ಈ ಒಂದು ಗಾಯತ್ರೀ ಮಂತ್ರದಿಂದ ಇಪ್ಪತ್ತನಾಲ್ಕು ದೇವತೆಗಳು ಅನುಗ್ರಹಿಸುವ ಶಕ್ತಿ ಯ ಪ್ರಾಪ್ತಿ ಗಾಯತ್ರೀ nn ಮಂತ್ರ ಜಪ ಮಾಡುವವನಿಗೆ ಲಬ್ಯ ವಾಗುತ್ತದೆ.....
ಶ್ರೀಕೃಷ್ಣಾರ್ಪಣಮಸ್ತು
ಸದ್ವಿಚಾರ ಸಂಗ್ರಹ

Likes: 6