ಸಾವಿರಾರು ಕೋಟಿ ಶ್ರೀಮಂತನೂ ನೂರು ರೂಪಾಯಿ ದುಡಿಯುವ ಬಡವನೂ ಸಮಾನತೆಯಲ್ಲಿ ಇರುವ ಏಕೈಕ ಜನಾಂಗ ಒಂದನ್ನು ನೋಡಿದ್ದರೆ ಅದು ಜಿ.ಎಸ್.ಬಿ. ಜನಾಂಗ ಮಾತ್ರ
ಈ ಮಣ್ಣಿನಲ್ಲಿ ಅಂದು ಹರಿದಿದ್ದ ಇಂದು ಮರೆಯಾಗಿ ಇತಿಹಾಸದೊಳಗೆ ಹುದುಗಿ ಹೋದ ಸರಸ್ವತಿ ನದಿ ತಟದಲ್ಲಿ ಉಗಮಿಸಿದ ನಾಗರೀಕತೆಯ ಅವಿಛ್ಛಿನ್ನ ಪ್ರವಾಹದ ಪರಂಪರೆಯುಳ್ಳ ಆ ಜನಾಂಗದವರ ಬಗ್ಗೆ ನನಗೆ ಸದಾ ಗೌರವವಿದೆ.. ಅವರನ್ನ ಜಿ.ಎಸ್.ಬಿ. ಎಂದು ಕರೆಯುತ್ತೇವೆ. ಅಂದರೆ “ಗೌಡ ಸಾರಸ್ವತ ಬ್ರಾಹ್ಮಣ” ಪೋರ್ಚುಗೀಸರ ಧಬ್ಬಾಳಿಕೆಗೆ ಬಲಿದಾನದ ಉತ್ತರಕೊಟ್ಟು ತಮ್ಮ ಧರ್ಮವನ್ನ ಉಳಿಸಿಕೊಳ್ಳಲೋಸುಗ “ಬೈಬಲ್ ಒಪ್ಪಿಕೋ ಅಥವ ಕತ್ತಿಗೆ ಕತ್ತು ಕೊಡು” ಎನ್ನುವ ಮತಾಂತರದ ಹುನ್ನಾರವನ್ನ ಧಿಕ್ಕರಿಸಿ ಪ್ರತಿಭಟಿಸಿದವರು ಅವರು. ಸತ್ತು ಮಲಗುವುದಕ್ಕೂ ಸಿದ್ದ ಸೋತು ಶರಣಾಗಲಾರೆವು ಎಂದು ಬಲವಾಗಿ ಬಡಿದಾಡಿದವರು ಜಿ.ಎಸ್.ಬಿ. ಜನಾಂಗದವರು. ತಮ್ಮ ಬದುಕಿನುದ್ದಕ್ಕೂ ವಲಸೆಗೊಳ್ಳುತ್ತಲೇ ಬಂದರೂ ಎಲ್ಲಿ ತಲುಪಿದರೋ ಅಲ್ಲಿಂದಲೇ ಚಿಗುರೊಡೆದು, ಕುಡಿಯೊಡೆದು ಎದ್ದು ನಿಂತವರು.. ದೇಶದ ಪರಂಪರೆ, ಧರ್ಮದ ಉಳಿವಿಗಾಗಿ ಸದಾ ಕಾಲಾ ಧ್ವನಿಯಾಗುತ್ತಲೇ ಬಂದವರು. ತಮ್ಮ ಬದುಕಿನ ನಿರಂತರ ಚಲನಶೀಲತೆಯಲ್ಲೂ “ಸತ್ಯ, ನಿಷ್ಠೆ, ಸ್ವಾಭಿಮಾನ, ಮತ್ತು ನಿರಂತರವಾದ ಪರಿಶ್ರಮವನ್ನ ನೆಚ್ಚಿಕೊಂಡೇ ಗೆದ್ದೂ ತೋರಿಸಿದವರು. ನನಗೆ ಸಾಕಷ್ಟು ಮಂದಿ ಕೊಂಕಣಿ ಗೆಳೆಯರಿದ್ದಾರೆ. ಅವರ ಮನೆಯಲ್ಲಿ ಆಗಾಗ ಊಟಕ್ಕೂ ಕರೆಯುತ್ತಾರೆ. ಅವರ ಮಡಿವಂತಿಕೆ ಸ್ನಾನದಲ್ಲಿಲ್ಲ ಜ್ಞಾನದಲ್ಲಿ ಎನ್ನುವುದು ನನಗೆ ಎಂದೋ ಅರ್ಥವಾಗಿ ಹೋಗಿದೆ. ಅವರ ಮೇಲೆ ಹಲವಾರು ಆರೋಪಗಳಿವೆ. “ಅವರು ತಮ್ಮ ದೇವಸ್ಥಾನಗಳಿಗೆ ಯಾರನ್ನೂ ಕರೆಯುವುದಿಲ್ಲ” ಎನ್ನುವುದಾಗಿ. ಕುಂದಾಪುರ, ಕಾರ್ಕಳ ಮುಂತಾದ ಕಡೆ ಇರುವ ವೆಂಕಟರಮಣ ದೇವಸ್ಥಾನಗಳು ಇದಕ್ಕೆ ಅಪವಾದವಾಗಿ ಕಾಣ ಬಹುದು. ಹಿಂದೆ ಬೇರೆ ರಾಜ್ಯದಿಂದ ವಲಸೆ ಬಂದವರಾದ್ದರಿಂದ ಅವರು ತಮ್ಮಷ್ಟಕ್ಕೇ ತಾವೇ ತಮ್ಮ ಆಚರಣೆಗಳನ್ನ ಮಾಡಿಕೊಂಡು ಬಂದವರು. ಬೇರೆಯವರು ಅವರ ಭಿನ್ನ ಭಾಷೆಯ ಕಾರಣಕ್ಕೆ “ತಾವಾಗಿಯೇ “ಪ್ರತ್ಯೇಕತೆಯ” ಪರೀಧಿ ಹಾಕಿಕೊಂಡರೇ ಹೊರತು. ಜಿ.ಎಸ್.ಬಿ. ಜನಾಂಗದವರು ಎಂದೂ ಸಮಾಜದಲ್ಲಿ ಬೇಧ ಮಾಡಿಲ್ಲ ಎನ್ನುವುದು ಸತ್ಯ. ಅವರ ವ್ಯವಹಾರ ಜಾಣ್ಮೆಯನ್ನ ಯಾರೇ ಆದರೂ ಮೆಚ್ಚಲೇ ಬೇಕು. ಕೆಲವರು ಅದನ್ನು ಕೊಂಕಣಿ ಜನಾಂಗದ ಜಿಪುಣತನ ಎನ್ನುವುದಿದೆ.. “ಬೆಣ್ಣೆ ಮೇಲಿನ ಕೂದಲು ತೆಗೆದಂತೆ, ನಯವಾಗಿ ಮಾತನಾಡುತ್ತಲೇ ಅವರು ಮಾಡುವ ವ್ಯವಹಾರದ ಜಾಣ್ಮೆ” ಕೆಲವರಿಗೆ ಅಚ್ಚರಿ ಮೂಡಿಸುತ್ತದೆ. ಬದುಕಿನಲ್ಲಿ ಉನ್ನತಿ ತಲುಪಬೇಕಿದ್ದರೆ ಸರಳತೆ ಅತೀ ಮುಖ್ಯ ಎನ್ನುವುದನ್ನ ನಾವು ಅವರಿಂದ ಕಲಿಯಬೇಕಿದೆ. ಜೀವನದಲ್ಲಿ ಗೆದ್ದ ಬಹುತೇಕರು ಹೇಳಿದ್ದೂ ಕೂಡ ಇದನ್ನೇ “ಲೆಕ್ಕಾಚಾರವಿಲ್ಲದ ಬದುಕಿನ ಲೆಕ್ಕ ಚುಕ್ತಾ ಆಗೋದು ಬೇಗ” ನೂರಾರು ಕೋಟಿ ಶ್ರೀಮಂತನಿದ್ದರೂ ಒಂದು ಪಂಚೆ ಉಟ್ಟುಕೊಂಡು ಓಡಾಡುವ ಜಿ.ಎಸ್.ಬಿ. ನಾಯಕರುಗಳು ತಮ್ಮ ಸರಳತೆಯಲ್ಲೇ ವಿಷಿಷ್ಠರಾಗಿ ಕಾಣಿಸುತ್ತಾರೆ. ಇಂದು ನಮ್ಮಲ್ಲಿ ದೇವಸ್ಥಾನದಲ್ಲಿ ಕೆಸರಿ ದ್ವಜಗಳನ್ನ ನೋಡುತ್ತೇವೆ.. ಕೆಲವರು ಕೇಸರಿ ಪಂಚೆಗಳನ್ನೂ ಧರಿಸುತ್ತಾರೆ. ಆದರೆ ಶತಮಾನಗಳ ಹಿಂದೇ ಜಿ.ಎಸ್.ಬಿ. ಜನಾಂಗಕ್ಕೆ ಸೇರಿದ ದೇವಳದ ಮೇಲೆ ಕೆಸರಿ ಧ್ವಜಗಳು ಹಾರಾಡುತ್ತಿದ್ದವು.. ಅವರ ಧಿರಿಸಿನಲ್ಲಿ ಕೇಸರಿಯೇ ಪ್ರಾಮುಖ್ಯತೆ ಪಡೆದಿತ್ತು. ತಾವು ಎಲ್ಲೇ ಹೋದರು, ಯಾವ ಕ್ಷೇತ್ರದಲ್ಲಿ ಕೈಯಾಡಿಸಿದರೂ ಅಲ್ಲಿ ಅವರು ಯಾಕೆ ಗೆಲ್ಲುತ್ತಾರೆಂದರೆ “ಇಂದಲ್ಲ ನಾಳೆ ಗೆದ್ದೇ ಗೆಲ್ಲುತ್ತೇನೆ” ಎನ್ನುವ ಅಚಲವಾದ ವಿಶ್ವಾಸ, ವ್ಯವಹಾರದಲ್ಲಿನ ಪರಿಶುದ್ದತೆ, ನಿರಂತರವಾದ ಪರಿಶ್ರಮ ಮತ್ತು ಸರಳತೆಯ ಮೂಲಮಂತ್ರ.. ಇದೇ ಅವರ ಗೆಲುವಿನ ಗುಟ್ಟು.. ಜಿ.ಎಸ್.ಬಿ. ಯವರಲ್ಲಿ ತೊಂಬತ್ತೊಂಬತ್ತು ಬಾಗಶಃ ಸಂಖ್ಯೆಯವರು ಪ್ರಖರವಾದ ರಾಷ್ಟಾಭಿಮಾನಿಗಳು. ಅವರು ಯಾವುದೇ ರಾಜಕೀಯ ಪಕ್ಷಗಳಲ್ಲಿದ್ದರೂ ರಾಷ್ಟ್ರೀಯ ವಿಚಾರಧಾರೆಗಳು ಅವರಲ್ಲಿ ಉತ್ಕಟವಾಗಿರುವುದನ್ನ ನಾನು ಗಮನಿಸಿದ್ದೇನೆ.. ಮೊನ್ನೆ ಸಾಲಿಗ್ರಾಮದ ಪೇಟೆಯಲ್ಲಿ ಜಿ.ಎಸ್.ಬಿ. ಜನಾಂಗದವರು ತಮ್ಮ ಅಂಗಡಿ, ಮನೆಗಳ ಮುಂದೆ ತೋರಣ ಕಟ್ಟಿ, ರಂಗೋಲಿ ಹಾಕಿ ನಂದಾ ದೀಪ ಹಚ್ಚಿಟ್ಟಿದ್ದರು. ಒಂದಷ್ಟು ಜನ ಭಜನೆ ಮಾಡುತ್ತ ಬಂದು ಪ್ರತೀ ನಂದಾ ದೀಪದ ಸುತ್ತಲೂ ಭಜನೆ ಮಾಡುತ್ತಾ ಪ್ರದಕ್ಷಿಣೆ ಹಾಕುತ್ತಾ ಹೋದರು. ಇಂದು ನಮ್ಮ ಪೀಳಿಗೆ ಭಜನೆಯನ್ನ ಮರೆತೇ ಹೋಗಿದೆ. ನನ್ನ ಹಿರಿಯರ ಕಾಲದಲ್ಲಿ ಗಿಳಿಯಾರಿನಲ್ಲಿಯೂ ಹೀಗೆ ವಾರ ಭಜನೆಗಳು ನಡೆಯುತ್ತಿತ್ತು ಎಂದು ಕೇಳಿದ್ದೆ. ಆ ಪರಂಪರೆಯನ್ನ ಜಿ.ಎಸ್.ಬಿ.ಯವರು ಇಂದಿಗೂ ಅನುಚಾನವಾಗಿ ನಡೆಸುತ್ತಾರೆ.. ಸಂಸ್ಕೃತಿ, ಸಂಸ್ಕಾರದ ವಿಚಾರಕ್ಕೆ ಬಂದರೆ ಅವರನ್ನ ಮೀರಿಸುವವರಿಲ್ಲ. ಕೋಟದಲ್ಲಿ ಒಮ್ಮೆ ಜಿ.ಎಸ್.ಬಿ ತಂಡದ ದೀಪೋತ್ಸವದ ಮೆರವಣಿಗೆಯೊಂದು ಸಾಗುತ್ತಿತ್ತು.. ಅಲ್ಲಲ್ಲಿ ಕೆಲವರು ಮಜ್ಜಿಗೆ ಮುಂತಾದ ಪಾನಕ ಕೊಡುತ್ತಿದ್ದರು.. ಆ ಮೆರವಣಿಗೆಯ ಹಿಂದೆ ಬರುತ್ತಿದ್ದ ಒಂದಷ್ಟು ಯುವಕರು ಆ ಕಸವನ್ನೆಲ್ಲಾ ಎತ್ತುತ್ತಾ ಬರುತ್ತಿದ್ದರು!.. ಹೆದ್ದಾರಿಗಳಲ್ಲಿ ಅವರು ಮೆರವಣಿಗೆ ಹೊರಡುವ ಚೆಂದವನ್ನ ನೀವು ನೋಡಬೇಕು. ವ್ಹಾ ಅದ್ಭುತ.. ಪ್ರತಿಯೊಬ್ಬರೂ ಅತ್ಯಂತ ಶಿಸ್ತಿನಲ್ಲಿ ಸಾಗುತ್ತಾರೆ.. “ಗೋ ಸ್ಲೋ” ಎನ್ನುವ ಫಲಕ ಹಿಡಿದು ವಾಹನ ಸವಾರರಿಗೂ ಕೆಲವರು ಮಾರ್ಗದರ್ಶನ ಮಾಡುತ್ತಾ ಎಲ್ಲಿಯೂ ತೊಂದರೆಯಾಗದಂತೆ ಸಾಗುವುದು ಅವರ ವೈಶಿಷ್ಟ್ಯ.. “ ಜೈ ಜೈ ಮಾತಾ ಭಾರತ ಮಾತ ಜೈ ಜೈ ಗೀತಾ ಭಗವಧ್ಗೀತ” ಎನ್ನುವ ಸ್ಲೊಗನ್ ನನ್ನ ಕಿವಿಗೆ ಬಿದ್ದಿದ್ದೇ ಕೋಟದ ಕಾಶಿಮಠದಲ್ಲಿ .. ತಾನು ಫೂಜಿಸುತ್ತಿದ್ದ ಮೂರ್ತಿಯನ್ನ ದುಷ್ಟರಿಂದ ರಕ್ಷಿಸಿಕೊಂಡು ಗೋವಾದಿಂದ ಕರ್ನಾಟಕ, ಕೇರಳ ಮುಂತಾದೆಡೆ ವಲಸೆ ಹೋದ ಜಿ.ಎಸ್.ಬಿ. ಗಳು ಇಂದು ಅಲ್ಲೆಲ್ಲಾ ಕಡೆಯಲ್ಲೂ ಗೆದ್ದು ತೋರಿಸಿದ್ದಾರೆ.. ಸಾವಿರಾರು ಕೋಟಿ ಶ್ರೀಮಂತನೂ ನೂರು ರೂಪಾಯಿ ದುಡಿಯುವ ಬಡವನೂ ಸಮಾನತೆಯಲ್ಲಿ ಇರುವ ಏಕೈಕ ಜನಾಂಗ ಒಂದನ್ನು ನೋಡಿದ್ದರೆ ಅದು ಜಿ.ಎಸ್.ಬಿ. ಜನಾಂಗ ಮಾತ್ರ.. ಧರ್ಮವೆಂದರೆ ಒಂದು ಜೀವನ ಪದ್ಧತಿ.. ಈ ಹಿಂದೂ ಜಿವನ ಪದ್ಧತಿಯನ್ನ ಅತ್ಯಂತ ವೈಷಿಷ್ಟ್ಯದೊಂದಿಗೆ ಇಂದಿಗೂ ಅನುಸರಿಸುವ ಜನಾಂಗವೆಂದರೆ ಅದು ಜಿ.ಎಸ್.ಬಿ. ಜನಾಂಗ ಎನ್ನುವುದು ಸೌರಸತ್ಯ.. ಜಾತಿ ಬೇಧಕ್ಕೂ ಮಣೆ ಹಾಕದೆ ಸಮಾಜದಲ್ಲಿ ಸಾಮರಸ್ಯದ ದೀಪ ಬೆಳಗಿ ಅದಕ್ಕೆ ನಿರಂತರವಾಗಿ ಸಹಬಾಳ್ವೆಯ ತೈಲವೆರೆವ ಜನಾಂಗವಿದ್ದರೆ ಅದು ಜಿ.ಎಸ್.ಬಿ. ಜನಾಂಗ.. ವ್ಯವಹಾರ ಜಾಣ್ಮೆ ಪಡೆಯಲಿಕ್ಕೆ ದೊಡ್ಡ ದೊಡ್ಡ ಡಿಗ್ರಿ ಸಂಪಾದಿಸುವುದಕ್ಕಿಂತಲೂ ಆ ಕ್ಷೇತ್ರದಲ್ಲಿ ಗೆದ್ದಿರುವ ಜಿ.ಎಸ್.ಬಿ. ಜನಾಂಗದ ಕೆಲವರ ಬದುಕಿನ ಯಾದಿಯನ್ನ ಅರಿತರೆ ಸಾಕು ಎನ್ನುವುದು ನನ್ನ ಅಭಿಮತ.. ಏನಂತೀರಿ?. ಗೆಳೆಯ ನಾಗಭೂಷಣ ಕಳಿಸಿದ್ದ ಗೋಪಾಲ ಕೃಷ್ಣ ಪೈಯವರ ಒಂದು “ಅದ್ಭುತ ಕಾದಂಬರಿ “ಸ್ವಪ್ನ ಸಾರಸ್ವತ “ ಮತ್ತೊಂದು ಸುತ್ತಿನ ಓದಿಗಾಗಿ ಕೈಗೆತ್ತಿಕೊಂಡಿದ್ದೇನೆ.. ಹದಿನಾರು ಮತ್ತು ಹದಿನೇಳನೆ ಶತಮಾನದಲ್ಲಿ ನಡೆದ ಪೋರ್ಚುಗೀಸರ ಧೌರ್ಜನ್ಯ ಮತ್ತು ಜಿ.ಎಸ್.ಬಿ. ಜನಾಂಗದ ಸಂಗ್ರಾಮ, ಅವರ ಧುರ್ಭರ ದಿನಗಳು, ಫಲ್ಲಟಗಳು. ನಾಗ್ಡೋ ಬೇತಾಳ ಎನ್ನುವ ರೋಚಕ ಪಾತ್ರ… ಸ್ವಪ್ನ ಸಾರಸ್ವತ ನನ್ನ ಮತ್ತೊಂದು ಸುತ್ತಿಗೆ ಆವರಿಸಿಕೊಳ್ಳುತ್ತಿದೆ.. ನೀವೂ ಒಮ್ಮೆ ಓದಿ..